ಅಗಲಿಕೆ
ಚಿಲಿಪಿಲಿಯಾ ಧ್ವನಿಯು ಅಂದು
ಬೇಕು ಬೇಕೆಂಬ ಕಳಕಳರವ
ಹಾರಿ ದೂರದಿಂದ ತಂದ
ಹಣ್ಣು ಹುಪ್ಪಟೆಯ ತಿಂದು
ರಕ್ಕೆ ಬಲಿತು ಪುಕ್ಕ ಬೆಳದು
ಗೂಡ ಸುರಕ್ಷತೆಯ ತೊರೆದು
ಹಾರಲೆಂದು ಗರಿಯಕೆದರಿ
ಗೂಡ ಹೊಸ್ತಿಲ್ಲಲ್ಲಿ ನಿಂತು
ಹೋಗಿಬರುವೆ ನಾನು ಎಂದು
ರಕ್ಕೆ ಚಾಚಿ ನಿಂತ ಮಗುವೆ
ಶುಭದ ಹಾರೈಕೆ ನಿನಗೆ
ಕಣ್ಣು ತುಂಬಿ ನೀರು ಹರಿದು
ಎದೆಯ ನೋವ ಅದುಮಿ ಹಿಡಿದು
ಮುಗುಳುನಗೆಯ ಬೀಸಿ ಹಿಗ್ಗಿ
ಸಂತಸದಿ ಶುಭವಕೋರಿ
ಗೆಲ್ಲು ನೀನು ಜಗವನ್ನೆಲ್ಲ
ಹಂಚು ಜಗಕೆ ಸಿಹಿಯ ಬೆಲ್ಲ
ಬಾರದಿರಲಿ ಕಷ್ಟವೆಲ್ಲ
ಇರಲಿ ನೀರಸ ನನಗೆ ಎಲ್ಲ
ನಿಶಬ್ಧದ ಗೂಡಿನಲ್ಲಿ
ಕಾದು ಕುಳಿತೆ ನಿನ್ನ ದನಿಗೆ
ಬರಲಿ ಸಂತಸದಾ ಆ ಸುದಿನ
ಮತ್ತೆ ನಿನ್ನ ಮರಳಿಕೆ
ಇರಲಿ ಈ ಕ್ಷಣಕೆ ನನ್ನಲ್ಲಿ
ದುಃಖದ ಈ ಅಗಲಿಕೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ