ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ ಪರನು ನಾನೇಪರನಾಗಲೆಂತೋ ಅಲೆಯು ಕಡಲಕಡೆಗೆ ಬಾರೆ
ಧಾವಿಪುದು ಯೆಂತದುವು ಧರಣಿಯತ್ತ ?
ಅಂತ್ಯದಲಿ ಎದೆಗುಂದಿ ಧರೆಯ ಪಾದವ ತೊಳೆದು
ಪೋಗುವುದದು ಅನಂತದತ್ತ !
ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ ಪರನು ನಾನೇ ಉದ್ಭವಿಪುದು ಪ್ರತಿ ಕಿಡಿಯು ಬೆಳಕ ನೀಡುವೆನೆಂದು
ಕಿಡಿ ಕಿಡಿಯು ಸೇರುತಲೇ ಅಗ್ನಿ ಶಿಖರ
ಪುಡಿ ಕಿಡಿಯ ಬೆಳಕಿನಲಿ ಸಾಧಿಸವೆನನು ನಾವು
ಕಿಡಿಯ ಐಕ್ಯತೆಯಾಗೆ ಬೆಳಕು ಪ್ರಖರ
ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ ಪರನು ನಾನೇ
ಪರರ ಅರಿವೇಕೆನಗೆ ಪರನು ನಾನೇ
ಮರ ಎಂಬುವವೇ ನಾವು ಪರ್ಣ ಒಂದನು ನೋಡಿ
ಅಲ್ಲಿರ್ಪ ಪೂ ಅಥವಾ ಟೊಂಗೆಯೊಂದನು ನೋಡಿ?
ಬೇರ್ಕಾಂಡ ಪರ್ಣ ಪೂ ಸೇರಲದು ಮೈಗೂಡುವುದು
ಸೊಗಸಾದ ನೆರಳೀವ ಚಂದಾದಾ ತರುವು
ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ ಪರನು ನಾನೇ
ಬೇರ್ಕಾಂಡ ಪರ್ಣ ಪೂ ಸೇರಲದು ಮೈಗೂಡುವುದು
ಸೊಗಸಾದ ನೆರಳೀವ ಚಂದಾದಾ ತರುವು
ಲೀನವಾದೆನು ನಾನು ನನ್ನತನದ ನನ್ನೊಳು
ಪರರ ಅರಿವೇಕೆನಗೆ ಪರನು ನಾನೇ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ