ನವಚೇತನ, ನವೋಲ್ಲಾಸ, ನವ ನವೀನತೆಯಿಂದ 
ಹೊಸ ಬುನಾದಿಯೊಂದಿಗೆ ಹೊಸ ಸೃಷ್ಟಿಯತಾ 
ಈ ಉಗಾದಿಗೆ ಉಧ್ಬವಿಸು ನವಮಾನವಾ 
ನನ್ನ ನನ್ನವರನೆಲ್ಲ ಮರೆತು, ನಿನ್ನ ನಿನಿನ್ನವರನೆಲ್ಲ ತೊರೆದು 
ಹೊಸ ಬಾಳ ಬಾಗಿಲಿಗೆ ಬಂದು ನಿಂತು 
ನನ್ನ ನಿನ್ನವರನೆಲ್ಲ ಒಂದೆಂದು ಕಾಣುತ 
ಆಹ್ವಾನಿಸು ಸವಿಯಲು ನವ ಸ್ವಾಧವಾ 
ಈ ಉಗಾದಿಗೆ ಉಧ್ಬವಿಸು ನವಮಾನವಾ
ಬದುಕಿನಾ ಬೇವು ಬೆಲ್ಲಗಳ ಸವಿಯುತ್ತ, ಸವಿಸುತ್ತ 
ಸವಿಉಣಿಸಿ, ಕಹಿಉಂಡು, ತಿಳಿ ಸತ್ಯವ ಕಂಡು 
ಬೆಳಕು ಕತ್ತಲೆಗಳೆಲ್ಲ ಮಾಯೆಯಾತೆರೆನೆಂದು  
ಈ ಉಗಾದಿಗೆ ಉಧ್ಬವಿಸು ನವಮಾನವಾ
ಹಳೆ ಮರವು ಚಿಗಿರೊಡೆಯೆ, ಹಸಿರು ಭರವಸೆ ತೋರೆ 
ಪೂ ಫಲಗಳ ಆಶೆ ಮನದಲ್ಲಿ ಮೈತಾಳೆ 
ಕನಸಿನಾ ಆಸೆಗಳ ಕಾರ್ಯ ಕಾಯಕ ಮಾಡಿ 
ಹೊಸದಿಗಂತಗಳ ಜಯಸುವಾ ಹುರುಪಾಗಿ 
ಈ ಉಗಾದಿಗೆ ಉಧ್ಬವಿಸು ನವಮಾನವಾ 

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ